‘ಪ್ರೀತಿ ಕಿತಾಬು’ ನಾಳೆಯಿಂದ ತೆರೆಗೆ
Posted date: 25 Thu, Feb 2016 – 04:30:34 PM

ಪ್ರತಿಯೊಬ್ಬರ ಜೀವನದ ಪುಸ್ತಕದಲ್ಲಿ ‘ಪ್ರೀತಿ’ ಕೆಲವು ಪುಟಗಳಲ್ಲಿ ಸೇರಿಕೊಂಡಿರುತ್ತದೆ. ಚಿತ್ರರಂಗ ಹಾಗೂ ವಾಹಿನಿಗಳಲ್ಲಿ ಕೆಲಸ ಮಾಡಿದ ಅನುಭವ ಇರುವ ವಿಠ್ಠಲ್ ಭಟ್ ‘ಪ್ರೀತಿ ಕಿತಾಬು’ ಚಿತ್ರದ ಮೂಲಕ ನಿರ್ದೇಶಕರಾಗಿದ್ದಾರೆ. ಇಂಥ ವಿಠಲ್ ಭಟ್ ತಮ್ಮ ಕಿತಾಬೊನಲ್ಲಿ ಪ್ರೀತಿಯ ಹೊಸ ವ್ಯಾಖ್ಯಾನವನ್ನು ಸೃಷ್ಟಿಸಿದ್ದಾರೆ. ಅದು ಯಾವೆಲ್ಲಾ ವಿಶೇಷಗಳನ್ನು ಒಳಗೊಂಡಿವೆ ಎಂಬುದು ಕುತೂಹಲದ ವಿಚಾರ. ಸುಂದರವಾದ ತಾಣಗಳಲ್ಲಿ ಈ ಸಿನಿಮಾಕ್ಕೆ ಚಿತ್ರೀಕರಣ ಮಾಡಲಾಗಿದೆ.
ನಿಹಾಲ್, ದುನಿಯಾ ರಶ್ಮಿ ಹಾಗೂ ಪೂರ್ವಿ ಜೋಷಿ ಮುಖ್ಯ ತಾರಗಣದ ಈ ಚಿತ್ರ ‘ಪ್ರೀತಿ ಕಿತಾಬು’ ಚಿತ್ರವನ್ನು ರೈನ್ ಬೋ ಪ್ರೊಡಕ್ಷನ್ ಅಡಿಯಲ್ಲಿ ಶಮಂತ್ ಅವರು ನಿರ್ಮಿಸಿದ್ದಾರೆ.
ಗಣೇಶ್ ಹೆಗ್ಡೆ ಅವರ ಛಾಯಾಗ್ರಹಣ, ವಿ ಮನೋಹರ್ ಅವರ ಸಂಗೀತ ಇದೆ. ಅವಿನಾಶ್, ರಮೇಶ್ ಭಟ್, ಶ್ರೀಧರ್, ಬಿರಾದಾರ್, ಸಂಗೀತ, ಪವಿತ್ರ ಗೌಡ, ಸುಧಾಕರ್ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed